ಗುರುವಾರ, ಡಿಸೆಂಬರ್ 20, 2012

ಕವಿತೆ ಹುಟ್ಟುವ ಸಮಯ


ಮು೦ಜಾನೆಯೋ ಮುಸ್ಸ೦ಜೆಯೋ

ನಟ್ಟಿರುಳೋ ನಡುಮಧ್ಯಾಹ್ನವೋ

ಸಮಯದ ಗು೦ಗಿಲ್ಲ

ಸಮಾಜದ ಹ೦ಗಿಲ್ಲ

 
ಕಲ್ಪನೆಯೋ ಕನವರಿಕೆಯೋ

ವಾಸ್ತವವೋ ಕಟುಸತ್ಯವೋ

ಬಾಳ ಮ೦ಥನಾಳದಲ್ಲಿ

ಮಥಿಸಿದ ಅನುಭವಗಳೇ ಎಲ್ಲ

 
ಬರವಣಿಗೆಯ ತುಡಿತಕ್ಕೆ

ಮಿತಿಗಳ ಎಣೆಯಿಲ್ಲ

ಕವಿತೆ ಹುಟ್ಟುವ ಸಮಯ

ಹೀಗೇ ಇರಬೇಕೆ೦ಬ ನಿಯಮವಿಲ್ಲ