ಮಂಗಳವಾರ, ಸೆಪ್ಟೆಂಬರ್ 24, 2013

...

ಅರೆತೆರೆದ ಕಣ್ರೆಪ್ಪೆಗಳಲಿ
ಮರೆಯಾದ ಕಣ್ಣೋಟ
ತುಟಿಯ೦ಚಿನ ವ೦ಚಕ ನಗುವಲಿ
ಕಳೆದು ಹೋದ ಮುಗ್ಧತೆ
ಹೃದಯದ ಪ್ರತಿ ಮಿಡಿತದಲಿ
ಗೂಡು ಕಟ್ಟಿದ ಸ್ವಾರ್ಥ
ನಗುವಿರಲಿ ನೋವಿರಲಿ
ಇಷ್ಟೇ ನೆನಪಾಗುವುದಿಷ್ಟೇ
ರಾಗವಿಲ್ಲ ಭಾವ ಮೊದಲೇ ಇಲ್ಲ
ತ೦ಗಾಳಿಯಾಗಿ ಬೀಸಿದರೂ
ಮಳೆಯಾಗಿ ಸುರಿದರೂ
ಕಡಲಾಗಿ ಭೋರ್ಗರೆದರೂ
ಮೆಲುಕು ಹಾಕುತ್ತಿಲ್ಲ ಮನ
ನಿನ್ನನು ನಿನ್ನ ನೆನಪನು