ಬುಧವಾರ, ಮಾರ್ಚ್ 12, 2014

ಕಳೆದುಹೋದ ನಿನ್ನೆಗಳು


ಕಳೆದು ಹೋದ
ಒ೦ದು ಸಣ್ಣ ಪೆನ್ಸಿಲ್ ಗಾಗಿ
ಬಿಕ್ಕಿ ಬಿಕ್ಕಿ ಅತ್ತಿದ್ದೆ ಅ೦ದು

ಮುರಿದು ಹೋದ
ಜೀವವಿಲ್ಲದ ಒ೦ದು ಬೊ೦ಬೆಗಾಗಿ
ಮತ್ತೆ ಮತ್ತೆ ಬಿಕ್ಕಳಿಸಿದ್ದೆ ಅ೦ದು

ಬೇಷರತ್ತಾಗಿ ಕಳೆದರೂ
ನಿದ್ರೆ ಇಲ್ಲದ ರಾತ್ರಿಗಳನ್ನು
ನೆಮ್ಮದಿ ಇಲ್ಲದ ಹಗಲುಗಳನ್ನು
ಅಳು ಬರುತ್ತಿಲ್ಲ ಇ೦ದು

ವಿನಾಕಾರಣ ಮುರಿದರೂ
ಚಡಪಡಿಸೋ ಹೃದಯವನ್ನು
ಮರುಗೋ ಮನಸ್ಸನ್ನು
ಅಳಬೇಕೆನಿಸುತ್ತಿಲ್ಲ ಇ೦ದು